ಈ ದಿನ ಬೆಳಿಗ್ಗೆ ಶ್ರೀ ದೇವರ ಉಷಾ ಕಾಲಪೂಜೆ, ಸಹಸ್ರನಾಮ ಅಭಿಷೇಕ.ವಿಶೇಷ ಹರಿವಾಣ ನೈವೇದ್ಯ ಸಮರ್ಪಿಸಿ 11.30'ಕ್ಕೆ ಮಹಾಪೂಜೆ. ಅನಂತ ದೇವರ ಬಳಿ ಹೊರಟು ಉತ್ಸವ, ಸಣ್ಣ ರಥೋತ್ಸವ, ವಸಂತ ಪೂಜೆಯಾಗಿ ಪಾಲಕಿ ಬಲಿಯಾಗಿ ಶ್ರೀ ದೇವರು ಗರ್ಭಗುಡಿಯಲ್ಲಿ ವಿರಾಜಮಾನರಾಗುತ್ತಾರೆ. ಸಂಜೆ 7'ಕ್ಕೆ ಸರಿಯಾಗಿ ಅನಂತ ದೇವರ ಬಲಿ ಹೊರಟು ಸವಾರಿ ಬಲಿ, ಕಟ್ಟೆಪೂಜೆಯು ನಡೆದು ನಂತರ ಭದ್ರಾ ಸರಸ್ವತಿ ಸರೋವರದಲ್ಲಿ ಶ್ರೀ ದೇವರಿಗೆ ಅವಭೃತ ಸ್ನಾನ. ಜಳಕದ ಕೆರೆಯಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆದು ಗರಿಕೆ ಮುಖೇನ ಎಳ್ಳೆಣ್ಣೆ, ಕಡಲೆ ಪುಡಿ, ಅರಶಿನವನ್ನು ಲೇಪಿಸಿ ನಂತರ ಸರೋವರದಲ್ಲಿ ದೇವರೊಂದಿಗೆ ಮಂಗಳಸ್ನಾನ ಗೈಯ್ಯುವ ಭಕಾದಿಗಳಿಗೆ ಸೌಭಾಗ್ಯವೇ ಸರಿ. ನಂತರ ಸಂಪ್ರದಾಯದಂತೆ ಶ್ರೀ ದೇವರು ಬಂದುಧ್ವಜ.ಸ್ತಂಭದ ಬಳಿ ಬಂದು ಧ್ವಜಾವರೋಹಣ. ನಂತರ ಮಹಾಪೂಜೆಯಾಗಿ ಪದ್ಮನಾಭ ದೇವರಬಲಿ ಹೊರಟು ಉತ್ಸವ, ರಥೋತ್ಸವ, ಪಾಲಕಿ ಬಲಿ ಸೇವೆಯು ನಡೆದು ಶ್ರೀ ದೇವರು ಗರ್ಭಗುಡಿಯನ್ನು ಪ್ರವೇಶಗೈದು ಸಣ್ಣ ಕೂರ್ಮಾರತಿಯೊಂದಿಗೆ ವಾರ್ಷಿಕ ಉತ್ಸವ ಸುಸಂಪನ್ನಗೊಳ್ಳುತ್ತದೆ. ವಿ.ಸೂ:- ಅನಾದಿ ಕಾಲದಿಂದಲೂ (ಜೋಡು ದೇವರ ಬಲಿ ಹೊರತುಪಡಿಸಿ) ಕ್ಷೇತ್ರದ ಪ್ರಾಂಗಣದಲ್ಲಿ ಎಲ್ಲಾ ಉತ್ಸವಾದಿಗಳು ನಡೆಯುವುದು ಪದ್ಮನಾಭ ದೇವರಿಗೆ ಮಾತ್ರ. ಪದ್ಮನಾಭ ದೇವರು ಕ್ಷೇತ್ರದ ಪ್ರಾಂಗಣ ಬಿಟ್ಟು ಹೊರಗೆ ಸೇವೆ ಸ್ವೀಕರಿಸುವಂತಿಲ್ಲ. ಷಷ್ಟಿ ಬ್ರಹ್ಮ ರಥೋತ್ಸವ, ಅವಭೃತ ಕಟ್ಟೆ ಪೂಜ...